    ಮೂಲದೊಡನೆ ಹೋಲಿಸಿ

ಪ್ರಾಕ್ಶಿಲಾಯುಗ

 	ಉದರಂಭರಣೆ ಮತ್ತು ಆತ್ಮರಕ್ಷಣೆಗಾಗಿ ಮಾನವ ಶಿಲೆಗಳನ್ನು ಆಯುಧವಾಗಿ ಬಳಸುತ್ತಿದ್ದ ಶಿಲಾಯುಗದ (ಸ್ಟೋನ್ ಏಜ್) ಮೂರು ವಿಭಾಗಗಳ ಪೈಕಿ ಅತಿ ಪ್ರಾಚೀನವಾದ ಯುಗ (ಪೇಲಿಯೊಲಿತಿಕ್). ಪ್ರಾಚೀನ ಶಿಲಾಯುಗ ಪರ್ಯಾಯ ನಾಮ. ಇದರ ವ್ಯಾಪ್ತಿ ಕ್ರಿ.ಪೂ. ಸು.5,00,000-10,000 ವರ್ಷಗಳ ತನಕ ಇತ್ತೆಂದು ಹೇಳಲಾಗಿದೆ.

	ಪ್ರಾಕ್ಶಿಲಾಯುಗದಲ್ಲಿ ಮಾನವ ನದಿಯ ತೀರಗಳಲ್ಲಿ, ಸಮುದ್ರದ ಕರಾವಳಿಗಳಲ್ಲಿ ಮತ್ತು ಬೆಟ್ಟದ ತಪ್ಪಲುಗಳಲ್ಲಿ ಬಿದ್ದಿದ್ದ ಚೂಪಾದ ಕಲ್ಲುಚೂರುಗಳನ್ನು ಹುಡುಕಿ ಆಯುಧಗಳಂತೆ ಉಪಯೋಗಿಸುತ್ತಿದ್ದ. ಬರ್ಮ ಮತ್ತು ಸೂಡಾನುಗಳಲ್ಲಿದ್ದ ಇದೇ ಯುಗದ ಪ್ರಾಚೀನ ಮಾನವರಿಗೆ ಚಕಮುಕಿಕಲ್ಲಿನಂತೆ ಗಡುಸಾಗಿದ್ದ ಸೈಕತ ಮರದ ಚೂರುಗಳೇ ಆಯುಧಗಳು. ಹೀಗೆ ಬೆಣಚುವರ್ಗದ ಖನಿಜಗಳಿಂದಾದ ವಿವಿಧ ಶಿಲೆಗಳು ಬಲು ಅಡಕವಾದ ರಚನೆಯನ್ನು ಪಡೆದಿದ್ದ ಕಾರಣ ಆಯುಧಗಳಿಗೆ ಯೋಗ್ಯವೆನಿಸಿದ್ದುವು. ಇಂದಿಗೂ ಆಸ್ಟ್ರೇಲಿಯಾದ ಮೂಲನಿವಾಸಿಗಳು ಬೇಟೆಯಲ್ಲಿ ಬಳಸುವ ಶಿಲಾಯುಧಗಳನ್ನು ಪ್ರಾಚೀನ ಶಿಲಾಯುಗದ ಮಾದರಿಯಲ್ಲೇ ರಚಿಸುವುದು ಕಂಡುಬಂದಿದೆ.

	ಪ್ರಾಚೀನ ಶಿಲಾಯುಗವನ್ನು ಕೆಳ, ಮಧ್ಯ ಮತ್ತು ಮೇಲಿನ ಪ್ರಾಚೀನ ಶಿಲಾಯುಗಗಳೆಂದು ವಿಭಾಗಿಸಲಾಗಿದೆ. ಇವುಗಳ ಸರಿಸುಮಾರು ಹರವು ಹೀಗಿದೆ: ಕ್ರಿ.ಪೂ. ಸು.70,000 ವರ್ಷಗಳಿಗಿಂತ ಹಿಂದೆ ಕೆಳ ಪ್ರಾಚೀನ ಶಿಲಾಯುಗ, ಕ್ರಿ.ಪೂ. ಸು.70,000-32,000 ವರ್ಷಗಳತನಕ ಮಧ್ಯ ಪ್ರಾಚೀನ ಶಿಲಾಯುಗ, ಕ್ರಿ.ಪೂ. ಸು.32, 000-10,000 ವರ್ಷಗಳ ತನಕ ಮೇಲಿನ ಪ್ರಾಚೀನ ಶಿಲಾಯುಗ.
ಮೇಲಿನ

ಪ್ಲೀಸ್ಟೊಸೀನ್

Iಗಿ ಹಿಮಯುಗ

III ಹಿಮಾಂತರ
ಯುಗ
ಮೇಲಿನ ಪ್ರಾಚೀನ
ಶಿಲಾಯುಗ

ಮಧ್ಯಪ್ರಾಚೀನ
ಶಿಲಾಯುಗ
ಆರಿಗ್ನೇಷಿಯನ್, 
ಸೊಲ್ಯೂಬ್ರಿಯನ್,
ಮ್ಯಾಗ್ಡೆಲಿನಿಯನ್
ಇತ್ಯಾದಿ
ಮೌಸೆರಿಯನ್
ಲೆವೆಲ್ಲಾೈಸಿಯನ್

ಮಧ್ಯ
ಪ್ಲೀಸ್ಟೊಸೀನ್

III ಹಿಮಯುಗ
II ಹಿಮಾಂತರ
ಯುಗ 

II ಹಿಮಯುಗ
ಕೆಳಪ್ರಾಚೀನ
ಶಿಲಾಯುಗ
ಮೊದಲ ಲೆವೆಲ್ಲ್ಯಾಸಿಯನ್
ಆಷ್ಯೂಲಿಯನ್ ಚೆಲ್ಲಿಯನ್
 ಅಬೆವಿಲಿನ್ ಕ್ಲಾಕ್ಟೋನಿಯನ್

	
	ಮೇಲಿನ ಪಟ್ಟಿಯಲ್ಲಿ ತೋರಿಸಿರುವಂತೆ ಪ್ರಾಚೀನ ಸಾಂಸ್ಕøತಿಕ ಕುರುಹುಗಳನ್ನು ಆಧರಿಸಿ ಕೆಳಪ್ರಾಚೀನ ಶಿಲಾಯುಗವನ್ನು ಆಬೆವಿಲೆನ್-ಕ್ಲಾಕ್ಟೋನಿಯನ್, ಅಷ್ಯೂಲಿಯನ್-ಚೆಲ್ಲಿಯನ್, ಮತ್ತು ಮೊದಲ ಲೆವಲ್ಲ್ಯಾಸಿಯನ್ ಉಪಹಂತಗಳಾಗಿಯೂ ಮಧ್ಯಪ್ರಾಚೀನ ಶಿಲಾಯುಗವನ್ನು ಲೆವೆಲ್ಲ್ಯಾಸಿಯನ್ ಮತ್ತು ಮೇಲಿನ ಪ್ರಾಚೀನ ಶಿಲಾಯುಗವನ್ನು ಅರಿಗ್ನೇಷಿಯನ್, ಸೊಲ್ಯೂಬ್ರಿಯನ್ ಮೌಸ್ಟೆರಿಯನ್ ಉಪಹಂತಗಳಾಗಿಯೂ ವಿಭಾಗಿಸಿದ್ದಾರೆ. ಈ ಉಪಹಂತಗಳು ಅನುಕ್ರಮವಾಗಿ ಎರಡನೆಯ ಹಿಮಯುಗ, ಎರಡನೆಯ ಹಿಮಾಂತರಯುಗ, ಮೂರನೆಯ ಹಿಮಯುಗ, ಮೂರನೆಯ ಹಿಮಾಂತರಯುಗ ಹಾಗೂ ನಾಲ್ಕನೆಯ ಹಿಮಯುಗಗಳಿಗೆ ಸರಿಸಮವಾಗಿವೆ.

	ಕೆಳಪ್ರಾಚೀನ ಶಿಲಾಯುಧಗಳೆಂದರೆ ದಪ್ಪ ಕೈಗೊಡಲಿ ಮತ್ತು ಉರುಟು ಕಲ್ಲಿನ ಅಥವಾ ಒಡ್ಡೊಡ್ಡಾದ ಶಿಲಾಫಲಕದ ಹತ್ಯಾರುಗಳು. ಯೂರೋಪಿನ ಅನೇಕ ಕಡೆ ಈ ಯುಗದ ಅವಶೇಷಗಳು ಪ್ರಾಚೀನ ನದಿ ಮೆಕ್ಕಲುಗಳಲ್ಲಿ ದೊರೆತಿವೆ. ಹೀಗಾಗಿ ಈ ಯುಗವನ್ನು ನದಿಮೆಕ್ಕಲು ಕಾಲವೆಂದೇ ಹೆಸರಿಸಲಾಗಿದೆ. ಈ ಅವಶೇಷಗಳು ಪ್ರಮುಖವಾಗಿ ಉತ್ತರ ಫಾನ್ಸಿನ ಅಬೆವಿಲೆ ಮತ್ತು ಸೇಂಟ್ ಅಷ್ಯೂಲ್ ಬಳಿ ನದಿ ದಡಗಳಲ್ಲಿ ದೊರತ ಕಾರಣ ಉಪವರ್ಗಗಳಿಗೆ ಈ ಹೆಸರುಗಳನ್ನೇ ಇಡಲಾಗಿದೆ. ಇದು ಪ್ರಾಚೀನ ಶಿಲಾಯುಗದ ಮುಕ್ಕಾಲುಭಾಗವನ್ನು ಆವರಿಸಿದೆ. ಯೂರೋಪಿನಲ್ಲಿ ಈ ಯುಗದ ಎರಡು ಸಂಸ್ಕøತಿಗಳಿರುವುದು ಕಂಡುಬಂದಿದೆ. ಮೊದಲನೆಯದು ಆಬೆವಿಲಿಯನ್-ಆಷ್ಯೂಲಿಯನ್ ಸಂಸ್ಕøತಿ ಬಹುಶಃ ಇದಕ್ಕೆಮೂಲ ಆಫ್ರಿಕನ್ ಸಂಸ್ಕøತಿ. ಈ ಕಾಲದ ಶಿಲಾಯುಗಗಳ ಪೈಕಿ ದ್ವಿಮುಖ ಕೈಗೊಡಲಿಗಳು ವಿಶಿಷ್ಟವಾದವು. ಎರಡನೆಯದು ಕ್ಲಾಕ್ಟೋನಿಯನ್-ಮೌಸ್ಟೆರಿಯನ್ ಸಂಸ್ಕøತಿ. ಇದರ ಮೂಲ ಏಷ್ಯನ್ ಸಂಸ್ಕøತಿ. ಇಲ್ಲಿ ಶಿಲಾಫಲಕದ ಹತ್ಯಾರುಗಳೇ ಪ್ರಮುಖ.

	ಅಬೆವಿಲಿಯನ್ ಹಂತವನ್ನು ಚೆಲ್ಲಿಯನ್ ಹಂತವೆಂದೂ ಕೆಲವರು ನಿರ್ಣಯಿಸಿದ್ದಾರೆ. ಈ ಕಾಲದ ಆಯುಧಗಳು ಇಂಡಿಯ, ದಕ್ಷಿಣ ಆಫ್ರಿಕ, ಬರ್ಮ ಮತ್ತು ಚೀನಾದೇಶಗಳಲ್ಲಿ ದೊರೆತಿವೆ. ಪಶ್ಚಿಮ ಪಂಜಾಬಿನ ಪೋಟ್ವಾರ್ ಪ್ರಸ್ಥಭೂಮಿ ಮತ್ತು ಸೋನ್ ಕಣಿವೆಯಲ್ಲಿ ಈ ಯುಗದ ಒರಟೊರಟಾದ ಕೊಡಲಿಗಳು ದೊರೆತಿವೆ. ಇದಕ್ಕೆ ಸರಿಸಮವಾದ ಕ್ಲಾಕ್ಟೋನಿಯನ್ ಯುಗದಲ್ಲಿ ಶಿಲಾಫಲಕಗಳಿಂದ ಮಾಡಿದ ಹತ್ಯಾರುಗಳು ಕಂಡುಬಂದಿವೆ. ಆದಿಮಾನವರಾದ ಪಿತಿಕಾಂತ್ರೋಪಸ್ ಮತ್ತು ಸೈನಾನ್‍ತ್ರೊಪಸುಗಳಿಗೂ ಈ ಹಂತಕ್ಕೂ ನಿಕಟ ಸಂಬಂಧವಿರುವುದು ಇದರ ಅತಿಮುಖ್ಯ ಲಕ್ಷಣ. ಪೀಕಿಂಗ್ ಮಾನವ ಹಾಗೂ ಹೀಡೆಲ್‍ಬರ್ಗ್ ಮಾನವ ಈ ಶಿಲಾಯುಧಗಳನ್ನೂ ಬೆಂಕಿಯನ್ನೂ ಬಳಸುತ್ತಿದ್ದುದಕ್ಕೆ ಅನೇಕ ಪುರಾವೆಗಳು ದೊರೆತಿವೆ. ಇವರು ಬೇಟೆಗಾರರಾಗಿದ್ದು ಗುಹೆ ಗಹ್ವರಗಳಲ್ಲಿ ತಂಗುತ್ತಿದ್ದರು.

	ಪ್ರಾಚೀನ ಶಿಲಾಯುಗದ ವಿವಿಧ ಸಾಂಸ್ಕøತಿಕ ಹಂತಗಳಿಗೂ ಹಿಮಯುಗಗಳಿಗೂ ನಿಕಟ ಸಂಬಂಧವಿದೆಯೆಂದು ಭೂವಿಜ್ಞಾನಿಗಳ ಅಭಿಮತ. ಹಿಮಯುಗಗಳ ಅನುಕ್ರಮವಾದ ಹಿಂಜರಿತ ಹಾಗೂ ಮುಂಜರಿತಗಳನ್ನು ಅನುಸರಿಸಿ ಈ ವಿವಿಧ ಶಿಲಾಯುಗ ಸಂಸ್ಕøತಿಗಳು ಕಾಣಿಸಿಕೊಂಡಿರಬಹುದು. ಅದರಲ್ಲೂ ವಾಯವ್ಯ ಯೂರೋಪ್ ಮತ್ತು ಮಧ್ಯಏಷ್ಯಗಳಲ್ಲಿ ಪ್ಲೀಸ್ಟೊಸೀನ್ ಯುಗದಲ್ಲಾದ ಹಿಮನದಿಗಳ ಹಿಂಜರಿತ ಮುಂಜರಿತಗಳೂ ಇದೇ ರೀತಿ ದಕ್ಷಿಣ ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ತಲೆದೋರಿದ ಮಳೆಗಾಲ ಮತ್ತು ಬೇಸಗೆಗಳೂ ಬಹುಸಂಭವನೀಯ. ಯೂರೋಪಿನಲ್ಲಿ ತಲೆದೋರಿದ ಮೂರು ಮುಖ್ಯ ಹಿಮಾಂತರಗಳಲ್ಲಿ ಆ ಕಾಲದ ಮಾನವ ಕೈಗೊಡಲಿಗಳನ್ನು ಹಿಡಿದು ಬೇಟೆಗಾಗಿ ಯುರೋಪಿನ ವಾಯುವ್ಯ ಭಾಗಗಳಲ್ಲಿ ಅಲೆದಾಡಿದನಂತೆ. ಹಿಮಯುಗಗಳಲ್ಲಿ, ತಡೆಯಲಾರದ ಶೀತ ಹವೆಯಿದ್ದ ಕಾರಣ ಈ ಅಲೆಮಾರಿಗಳು ಅನುಕೂಲಕರವಾದ ಹವೆಯಿದ್ದ ದಕ್ಷಿಣ ಯೂರೋಪಿನತ್ತ ವಲಸೆ ಹೋಗಿರಬಹುದು ಇಲ್ಲವೇ ತಮ್ಮ ದಿನಚರ್ಯೆಗಳನ್ನೇ ಬದಲಾಯಿಸಿರುವ ಸಾಧ್ಯತೆಯೂ ಉಂಟು. ರೈಹಿನ್ ನದಿಯ ಪೂರ್ವಕ್ಕಿರುವ ಯೂರೋಪ್ ಖಂಡದ ಪ್ರದೇಶಗಳಲ್ಲಿ ಇಡೀ ಕೆಳಪ್ರಾಚೀನ ಶಿಲಾಯುಗದುದ್ದಕ್ಕೂ ಫಲಕಾಕೃತಿಯ ಶಿಲಾಯುಧಗಳೇ ಬಳಕೆಯಲ್ಲಿದ್ದ ಸಂಸ್ಕøತಿಯನ್ನು ಕಾಣಬಹುದು. ಆ ಕಾಲದ ಕೆಲವು ತಂಡಗಳ ಪ್ರಾಚೀನ ಮಾನವ (ಉದಾಹರಣೆಗೆ ಪೀಕಿಂಗ್ ಮಾನವ) ಆಗಾಗ್ಗೆ ಶಿಲಾಗುಹೆಗಳನ್ನೂ ಬಳಸುತ್ತಿದ್ದನೆನ್ನಲು ಹಲವು ದಾಖಲೆಗಳು ದೊರೆತಿವೆ. ಇದು ಕ್ರಮೇಣ ವ್ಯಾಪಿಸಿ ಮಧ್ಯ ಮತ್ತು ಮೇಲಿನ ಪ್ರಾಚೀನ ಶಿಲಾಯುಗಗಳಲ್ಲಿ ಆ ಕಾಲದ ಮಾನವ ಗುಹೆಗಳಲ್ಲಿ ವಾಸಮಾಡುವುದು ರೂಢಿಯಾಯಿತು. ಯೂರೋಪಿನ ಸುಣ್ಣ ಶಿಲಾಪ್ರದೇಶಗಳಲ್ಲಿರುವ ಅನೇಕ ಗುಹೆಗಹ್ವರಗಳಲ್ಲಿ ಇದು ವ್ಯಕ್ತವಾಗಿದೆ. ಈ ಕಾರಣದಿಂದಲೆ ಮಧ್ಯಪ್ರಾಚೀನಶಿಲಾಯುಗವನ್ನು ಪೂರ್ವ ಗುಹಾಕಾಲವೆಂದೂ ಮೇಲಿನ ಪ್ರಾಚೀನ ಶಿಲಾಯುಗವನ್ನು ಲೆವೆಲ್ಲ್ಯಾಸಿಯನ್ ಮತ್ತು ಮೌಸ್ಟೆರಿಯನ್ ಪುನಃ ವಿಭಾಗಿಸಲಾಗಿದೆ. ದಕ್ಷಿಣ ಫ್ರಾನ್ಸಿನ ಲೆಮೌಸ್ಟಿಯರಿನಲ್ಲಿ ಈ ಹಂತದ ಉತ್ತಮ ಶಿಲಾಫಲಕಗಳು ದೊರೆತ ಕಾರಣ ಅದೇ ಹೆಸರು ಇದಕ್ಕೆ ಅನ್ವರ್ಥವಾಯಿತು. ಈ ಸಂಸ್ಕøತಿಯ ಕುರುಹುಗಳು ಪ್ಯಾಲೆಸ್ಟೈನ್, ಟರ್ಕಿಸ್ತಾನ್ ಮತ್ತು ಪೂರ್ವ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಲ್ಲೂ ದೊರೆತಿವೆ. ಬಹುಶಃ ಹೀಡೆಲ್‍ಬರ್ಗ್ ಮಾನವನ ವಂಶಜ ನಿಯಾಂಡರ್ತಲ್ ಮಾನವ ಈ ಹಂತದವನಾಗಿದ್ದಾನೆ. ಇಂಗ್ಲೆಂಡಿನ ಸಸ್ಸೆಕ್ಸಿನಲ್ಲಿ ದೊರೆತ ಪಿಲ್ಟ್‍ಡೌನ್ ಮಾನವ ಈ ಕಾಲದವನು. ಮಧ್ಯಪ್ರಾಚೀನ ಶಿಲಾಯುಗ ಅಥವಾ ಮೌಸೈರಿಯನ್ ಕಾಲದಲ್ಲಿ ಒಪವಾದ ಶಿಲಾಫಲಕದ ಆಯುಧಗಳು ವಿಶಿಷ್ಟವೆನಿಸಿವೆ. ಮೇಲಿನ ಪ್ರಾಚೀನ ಶಿಲಾಯುಗದಲ್ಲಿ ಕಿರಿದಾದ ಶಿಲೆಯ ಅಲಗು ಹಾಗೂ ಮೂಳೆಗಳಿಂದಾದ ಆಯುಧಗಳೂ ಎದ್ದು ಕಾಣುತ್ತವೆ. ಕ್ರೋಮ್ಯಾಗ್ನನ್ ಮಾನವ ಈ ಕಾಲದವ. ಇದೇ ಕಾಲದ ಯೂರೋಪಿನ ಹಲವಾರು ಗುಹೆಯನ್ನು ಪರಿಶೀಲಿಸಿದಾಗ ನೆಲದ ಮೇಲೆ ಪದರು ರಚನೆ ವ್ಯಕ್ತವಾಯಿತು. ಮಣ್ಣು ಹಾಗೂ ಶಿಲಾಚೂರುಗಳಿಂದಾದ ಪದರುಗಳ ನಡುವೆ ಬೂದಿ ಮೂಳೆಯ ಚೂರುಗಳನ್ನು ಪ್ರಾಚೀನ ಮಾನವ ಬಳಸುತ್ತಿದ್ದ ಇತರ ಆಯುಧಗಳ ಚೂರುಪಾರುಗಳನ್ನು ಒಳಗೊಂಡ ಸ್ತರಗಳನ್ನೂ ಗುರುತಿಸಲಾಯಿತು. ಪ್ರತಿಯೊಂದು ಸ್ತರವೂ ಒಂದು ನಿರ್ದಿಷ್ಟ ಸಂಸ್ಕøತಿಯ ಪ್ರತೀಕ. ಇವುಗಳ ಸಹಾಯದಿಂದ ಪ್ರಾಚೀನ ಶಿಲಾಯುಗದ ವಿವಿಧ ಹಂತಗಳಲ್ಲಿಯ ಮಾನವನ ಜೀವನ ವಿಧಾನ, ಆಹಾರ, ಬಳಸುತ್ತಿದ್ದ ಆಯುಧಗಳು ಇವನ್ನು ಕುರಿತು ಉಪಯುಕ್ತ ಕುರುಹುಗಳು ದೊರಕಿವೆ. ವಿವಿಧ ಗುಹೆಗಳಲ್ಲಿ ದೊರೆತ ಸ್ತರ ಶ್ರೇಣಿಗಳನ್ನು ಪರಸ್ಪರ ತುಲನೆಮಾಡಿ ಮೇಲಿನ ಪ್ರಾಚೀನ ಶಿಲಾಯುಗದಲ್ಲಿ ಅರಿಗ್ನೇಸಿಯನ್, ಸೊಲ್ಯೂಟ್ರಿಯನ್ ಮತ್ತು ಮ್ಯಾಗ್ಡಲೆನಿಯನ್ ಎಂಬ ಮೂರು ಸಾಂಸ್ಕøತಿಕ ಹಂತಗಳನ್ನು ಗುರುತಿಸಿದ್ದಾರೆ. ದಕ್ಷಿಣ ಫ್ರಾನ್ಸಿನಲ್ಲಿ ಇವು ಅತ್ಯುತ್ತಮ ರೀತಿಯಲ್ಲಿ ಗೋಚರವಾಗಿವೆ. ಅಂದಿನ ಮಾನವ ಪ್ರಾದೇಶಿಕ ಹವಾಮಾನಕ್ಕೆ ಅನುಗುಣವಾಗಿ ಗುಹೆಗಳಲ್ಲದೆ ಬಯಲು ಪ್ರದೇಶಗಳಲ್ಲೂ ವಾಸಿಸಿದ ದಾಖಲೆಗಳು ಮೊರೇವಿಯ ಮತ್ತು ಫ್ರಾನ್ಸಿನ ಹಲವಾರು ಕಡೆ ಗೋಚರವಾಗಿವೆ.

	ಈ ಮೇಲಿನ ಪ್ರಾಚೀನ ಶಿಲಾಯುಗದ ಸಿರನೀಸ್ ಮತ್ತು ದಕ್ಷಿಣ ಫ್ರಾನ್ಸಿನ ಕೆಲವು ಗುಹೆಗಳಲ್ಲಿ ಭಿತ್ತಿಚಿತ್ರಗಳೂ ಕಂಡುಬಂದಿದ್ದು ಆದಿಮಾನವನ ಕಲಾಭಿಜ್ಞತೆಗೆ ಕನ್ನಡಿ ಹಿಡಿದಂತಿವೆ. ಇವುಗಳಲ್ಲಿ ಅವರು ಬೇಟೆಯಾಡುತ್ತಿದ್ದ ಪ್ರಾಣಿಗಳಾದ ಹಿಮಜಿಂಕೆ, ಕಾಡೆಮ್ಮೆ, ಬೃಹದ್ಗಜ, ಮೀನು ಹಾಗೂ ಒಮ್ಮೊಮ್ಮೆ ಸರೀಸೃಪ ಅಥವಾ ನೀರು ಹಕ್ಕಿಗಳು ಸರ್ವಸಾಮಾನ್ಯ. ಕೆಲವುವೇಳೆ ಮಾನವಚಿತ್ರಗಳೂ ಕಂಡುಬರುವುದುಂಟು. ಇವು ಸಾಮಾನ್ಯವಾಗಿ ಅಷ್ಟು ಚೆನ್ನಾಗಿರದೆ ಅನೇಕ ವೇಳೆ ಪ್ರಾಣಿಗಳ ಆಕೃತಿಗಳನ್ನೂ ಹೋಲುವುದುಂಟು. ಇವಲ್ಲದೆ ದಂತ ಹಾಗೂ ಮೂಳೆಯ ಕೆತ್ತನೆ ಬಳೆಗಳು ಮತ್ತು ಪುಟ್ಟವಿಗ್ರಹಗಳೂ ದೊರೆತಿವೆ.			    (ಬಿ.ವಿ.ಜಿ.)